¡Sorpréndeme!

ಆಪ್ತ ಮಿತ್ರನನ್ನ ನೆನೆದು ಕಣ್ಣೀರಿಟ್ಟ ಚಂದನ್ ಶೆಟ್ಟಿ | Filmibeat Kannada

2018-01-04 1,593 Dailymotion

Bigg Boss Kannada 5: Week 12: Chandan Shetty assumes that Diwakar got eliminated. Chandan Shetty remembers Diwakar & becomes emotional.

'ಬಿಗ್ ಬಾಸ್' ಮನೆಯೊಳಗೆ ಕುಚ್ಚಿಕ್ಕು ಗೆಳೆಯರಂತೆ ಇದ್ದವರು ಚಂದನ್ ಶೆಟ್ಟಿ ಹಾಗೂ ದಿವಾಕರ್. ಜಗಳ ಆಡಿದರೂ, ಮರುಕ್ಷಣವೇ ಎಲ್ಲವನ್ನೂ ಮರೆತು ಒಂದಾಗಿರುತ್ತಿದ್ದ 'ಆಪ್ತಮಿತ್ರರು' ಈ ಚಂದನ್ ಶೆಟ್ಟಿ ಮತ್ತು ದಿವಾಕರ್. 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ದಿವಾಕರ್ ವಿಜೇತರಾಗಬೇಕು ಎಂಬುದು ಚಂದನ್ ಶೆಟ್ಟಿ ಬಯಕೆ ಆಗಿತ್ತು. ಆದ್ರೆ, ಅದು ಈಡೇರುವ ಮುನ್ನವೇ 'ಬಿಗ್ ಬಾಸ್' ಮನೆಯಿಂದ ದಿವಾಕರ್ ಆಚೆ ಕಾಲಿಟ್ಟಿದ್ದು ಚಂದನ್ ಶೆಟ್ಟಿಗೆ ಬೇಸರ ತಂದಿದೆ. 'ದಿವಾಕರ್ ಎಲಿಮಿನೇಟೆಡ್' ಎಂದು ಲಿವಿಂಗ್ ಏರಿಯಾದಲ್ಲಿ ಇರುವ ಟಿವಿಯಲ್ಲಿ ಡಿಸ್ಪ್ಲೇ ಆದ್ಮೇಲೆ ಚಂದನ್ ಶೆಟ್ಟಿ ಭಾವುಕರಾಗಿ ಕಣ್ಣೀರು ಸುರಿಸಿದರು.''ದಿವಾಕರ್ ಔಟ್ ಆಗಿಲ್ಲ. ಜಯಶ್ರೀನಿವಾಸನ್ ಜೊತೆ ಸೀಕ್ರೆಟ್ ರೂಮ್ ನಲ್ಲಿ ಇದ್ದಾರೆ'' ಎನ್ನುತ್ತಲೇ ಇಷ್ಟು ದಿನ ಚಂದನ್ ಶೆಟ್ಟಿ ಭಾವಿಸಿದ್ದರು. ಆದ್ರೆ, ಲಿವಿಂಗ್ ಏರಿಯಾದಲ್ಲಿ ಇರುವ ಟಿವಿಗಳಲ್ಲಿ 'ದಿವಾಕರ್ ಎಲಿಮಿನೇಟೆಡ್', 'ಜಯಶ್ರೀನಿವಾಸನ್ ಎಲಿಮಿನೇಟೆಡ್' ಎಂದು ಡಿಸ್ಪ್ಲೇ ಆದ್ಮೇಲೆ ಚಂದನ್ ಶೆಟ್ಟಿ ದಿಗ್ಭ್ರಾಂತರಾದರು.